‘ನಾಗಮಂಡಲ’, ಗಿರೀಶ್ ಕಾರ್ನಾಡರು ಬರೆದ ಒಂದು ನಾಟಕ. ಇದು ನಾನು ಪಾಠಕ್ಕಾಗಿ ಹೊರತು ಓದಿದ ಮೊದಲ ಕನ್ನಡ ನಾಟಕ.
ನಾಗಮಂಡಲ ನಾಟಕದ ಕಥಾವಸ್ತು- ಮನೋರಂಜಿಸುವ ಅತಿರೇಕದ ಕಲ್ಪನೆ. ಇಂತಹ ಕಲ್ಪನ್ನೆಯನ್ನು ಗಿರೀಶ್ ಅವರು ಉತ್ತಮವಾಗಿ ಪಾತ್ರಗಳೊಂದಿಗೆ ನೇಯ್ದಿದ್ದಾರೆ. ಕಥೆ,ಜ್ಯೋತಿ, ಗೀತೆ,ಮನುಷ್ಯ -ಎಂಬ ಪಾತ್ರಗಳು ಪ್ರೇಕ್ಷಕರೊಡನೆ ಸಂಭಾಷಣೆಯಲ್ಲಿ ತೊಡಗಿ ನಾಟಕದ ಕಥೆಯನ್ನು ಮುಂದೆ ಕರೆದೊಯ್ಯುತ್ತವೆ.ನಾಟಕದಲ್ಲಿ ಪಾತ್ರಗಳ ಸಂಭಾಷಣೆ ಅತಿ ಸರಳವಾಗಿ, ಆದರೆ ಸೂಕ್ಷ್ಮ ವಿವರಗಳೊಂದಿಗೆ ಮೂಡಿ ಬರುತ್ತವೆ.
ಸುಮಾರು ನಾಲ್ಕು ವರ್ಷಗಳ ಬಳಿಕ ಕನ್ನಡ ಓದುತ್ತಿರುವ ನನಗೆ ನಾಗಮಂಡಲವನ್ನು ಓದುವುದು ಬಹಳ ಒಳ್ಳೆಯ ಅನುಭವವಾಗಿತ್ತು. ಓದುವಾಗ ಎಲ್ಲ ಪದಗಳ ಅರಿವೂ ನನಗಿದ್ದುದು ಹೆಮ್ಮೆಯ ವಿಷಯ 🙂 ಆದರೆ ಇಲ್ಲಿ ಟಿಪ್ಪಣಿ ಬರೆಯುವಾಗ ಕೆಲವು ಪದಗಳಿಗಾಗಿ ನಿಘಂಟನ್ನು ಬಳಸಿಕೊಂಡಿದ್ದೇನೆ.
ಹತ್ತು ದಿನಗಳ ಹಿಂದೆ ಮುಕ್ತಾಯಗೊಂಡ ಪುಸ್ತಕೋತ್ಸವದಲ್ಲಿ ಹಲವಾರು ಕನ್ನಡ ಪುಸ್ತಕಗಳನ್ನು ಕೊಂಡುಕೊಂಡಿದ್ದೇನೆ. ಇನ್ನು ಮುಂದೆ ಹೆಚ್ಚು ಆತ್ಮವಿಶ್ವಾಸದಿಂದ ಅವುಗಳನ್ನು ಓದುತ್ತೇನೆ,ಹಾಗು ನನ್ನ ಬ್ಲಾಗಿನಲ್ಲಿ ಕನ್ನಡದಲ್ಲಿ ಬರೆಯಲೆತ್ನಿಸುತ್ತೇನೆ.
ಇಂತಿ ನಿಮ್ಮ ಆತ್ಮೀಯ,
ರಾಘವೇಂದ್ರ
-
Recent Posts
- A short review of Jose Saramago’s meandering masterpiece: Death with Interruptions
- Undoing 6 decades in 6 years
- 2010s: A personal tale of my professional journey
- Views on Naomi Klein’s “This Changes Everything”
- Fumbling with Fiction
- Pseudo-/Liberal?
- Why I run!
- Joy of reading, and some critique of capitalism
- PhD Series: 1. Getting a position
- A decade of blogging
Archives
- My Tweets
I read the entire post! :DThe movie is beyond brilliant, too. Girish Karnad is pure genius. 🙂
I had presumed your Kannada was good:)And yes, I've heard that the movie's good too, will try to watch it.