ಸೂರ್ಪಣಂಗು : ಒಂದು ಪ್ರಭಾವಶಾಲಿ ನಾಟಕ

ಹಲವಾರು ದಿನಗಳ ನಂತರ, ಕನ್ನಡದಲ್ಲಿ ಒಂದು ಲೇಖನವನ್ನು ಬರೆಯುತ್ತಿರುವೆನು. ಈ ಲೇಖನವು ಒಂದು ತಮಿಳು ನಾಟಕದ ಕುರಿತು ಎಂಬುದು ವಿಶೇಷ. ಸೂರ್ಪಣಂಗು ಎಂಬ ತಮಿಳು ನಾಟಕ ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಾಯಿತು.

ನನಗೆ ಹಲವಾರು ಹೊಸದಾದ ವಿಚಾರಗಳು ಮತ್ತು ಮಹತ್ವದ ದ್ರಿಷ್ಟಿಕೋನಗಳು ಈ ನಾಟಕ ಹಾಗು ಅಲ್ಲಿ ಸೇರಿದ್ದ ಜನರಿಂದ ಅರಿವಾಯಿತು.

ಸಮಾನತೆ ಎಂಬುದು, ಬರಿಯ ಪಠ್ಯ ಸೀಮಿತ ವಿಚಾರವಾಗಿದ್ದು, ಇಂದಿಗೂ ಹಲವಾರು ವರ್ಗದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇಂತಹ ಒಂದು ವರ್ಗದ ಹೋರಾಟದ ಬಗ್ಗೆ ಈ ನಾಟಕದ ಆಯೋಜಕರ ಮೂಲಕ ತಿಳಿದು ಕೊಂಡೆನು.

ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅವರುಗಳ ಸಾಮಾಜಿಕ ತೊಂದರೆ, ಕಷ್ಟಗಳು ಮತ್ತು ಹೋರಾಟಗಳ ಬಗ್ಗೆ ಒಂದು ಇಣುಕು ದೊರಕಿತು. ಅಕ್ಕೈ ಪದ್ಮಶಾಲಿ ಅವರು ಲೈಂಗಿಕ ಅಲ್ಪಸಂಖ್ಯಾತರಲ್ಲಿ ಒಬ್ಬರಾಗಿದ್ದು, ಅವರ  ಅಂಗೀಕಾರ, ಹಕ್ಕು, ಮತ್ತು ಸಮಾನತೆಗಳಿಗಾಗಿ ತಮ್ಮ ಸಂಗಾತಿಯರೊಂದಿಗೆ ನಡೆಸುತ್ತಿರುವ ಜನಾಗೃತಿ ಚಟುವಟಿಕೆಗಳ ಬಗ್ಗೆಯು ಅರಿವಾಯಿತು. ಇಂತಹ ಅಸಮಾನತೆಗಳ ಗೂಡಾಗಿ ಬೆಳೆದಿರುವ ನಮ್ಮ ಸಮಾಜದಲ್ಲಿ ನಮ್ಮ ಪಾತ್ರವೇನು ಎಂದು ಆಲೋಚಿಸುವ ಅವಕಾಶವಾಗಿ ಈ ಅನುಭವ ಒದಗಿತು.

ಸೂರ್ಪಣಂಗು ನಾಟಕವು ಕನ್ನಡ ರಂಭೂಮಿಯೊಳಗೆ ತಮಿಳು ರಂಗಕ್ರಿಯೆಯ ಅನುಸಂಧಾನವೆಂದು ಪರಿಗಣಿಸಿ, ಪ್ರಸ್ತುತಿಸಿದರು . ನಾಟಕ ಗ್ರಾಮೇಣ ಮತ್ತು ಶುದ್ಢ ತಮಿಳಿನಲ್ಲಿದುದರಿಂದ, ನನಗೆ ವಚನ, ಸಂಭಾಷಣೆಗಳು ಅರ್ಥವಾಗಲಿಲ್ಲ. ಮಾತೃ ಭಾಷೆಯಾದರೂ ಇಂತಹ ಅವಸ್ಥೆಯಲ್ಲಿದೆ ನನ್ನ ತಮಿಳು 🙂

ಸಂಭಾಷಣೆ ಅರ್ಥವಾಗದಿದ್ದರೂ ನಟರ ಅಭಿನಯವು ಯಥಾರ್ಥವಾಗಿತ್ತು. ಗ್ರಾಮೇಣ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಹಸಿವು, ಕ್ಷಾಮ, ಬರ ಮತ್ತು ಜೇವನದ ದೈನಂದಿನ ಹೋರಾಟಗಳನ್ನು  ಅತಿ ಪ್ರಭಾವಶಾಲಿಯಾಗಿ ಅಭಿನಯಿಸಿದ್ದರು. ಆ ಪ್ರಭಾವವು ಪ್ರೇಕ್ಷಕರಾದ ನಮ್ಮ ಮನಸ್ಸನ್ನು ತೇವ್ರತೆಯಿಂದ ಬಿಗಿ ಹಾಕಿತ್ತು. ಹಲವಾರು ದೃಶ್ಯಗಳು ನೋಡುಗರನ್ನು ತಳಮಳಗೊಳಿಸಿತು. ಹೆಂಗಸರಿನ ಮೇಲಿನ ದೌರ್ಜನ್ಯ, ಕಾರ್ಮಿಕರ ಮೇಲೆ ಅತ್ಯಾಚಾರ ಇಂತಹ ಸಂಗತಿಗಳು ನಿಜವಾಗಿದ್ದರು ಅದನ್ನು ಒಂದು ಪ್ರಭಾವಶಾಲಿ ನಾಟಕದ ಮೂಲಕ ಕಾಣುವುದು ಬಹಳ ಕಷ್ಟಕರವೆನಿಸಿತು ನನಗೆ.

ಸುಮಾರು ಎರಡು ಗಂಟೆಗಳ ಕಾಲ ಗಾಢವಾದ ಪರಿಶ್ರಮ  ಮತ್ತು ಉತ್ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ನಟರು ಮತ್ತು ಅವರ ಪ್ರಯತ್ನವು ಮನದಾಳದಲ್ಲಿ ನೆಲೆಸಿದೆ. ನಾಟಕಕಾರರು ಪಡುವ ಪರಿಶ್ರಮವನ್ನು ನಾವು ಉತ್ತೇಜಿಸಿ ಬೆಂಬಲಿಸಬೇಕು. ಹಾಗು, ಇಂತಹ ನಾಟಕಗಳಲ್ಲಿ ಹೇಳಲ್ಪಡುವ ಸಂಗತಿಯನ್ನು ನಮ್ಮ ಜೇವನದಲ್ಲಿ ನಾವು ಸಂಧರ್ಭ ಬಂದಲ್ಲಿ ಅಳವಡಿಸಿಕೊಂಡು, ಸಮಾಜದಲ್ಲಿ ಸುಧಾರಣೆಯನ್ನು ತರಲು ನಮ್ಮಿಂದಾಗುವ ಪ್ರಯತ್ನವನ್ನು ಪಡಬೇಕು.

About Raghav/Raghu

A fortunate mass of hydrogen cloud conscious enough to be contemplating that very fact.
This entry was posted in kannada and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s