ಕೋಪ ಬರಲೇಬೇಕು!

ಇತ್ತೀಚಿಗೆ ಒಂದು ಸರಕಾರೀ ಕಛೇರಿಯಲ್ಲಿ ಕೆಲಸವಿದ್ದಿತು. ಒಂದೆರಡು ಮುಖ್ಯವಾದ ದಾಖಲೆಗಳನ್ನು ಅವರಲ್ಲಿ ಕೊಟ್ಟು , ಕೆಲಸಕ್ಕೆ  ಹೊರಡಬೇಕಾದ ಸನ್ನಿವೇಷ.

ಆ ಕಛೇರಿಯ ಕಾರ್ಯಸಮಯ ಬೆಳಿಗ್ಗೆ  ೯:೦೦ ರಿಂದ ಸಾಯಂಕಾಲ ೫:೦೦ ರವರೆಗೆ ಎಂದು ಒಂದು ಫಲಕದಲ್ಲಿ ಸೂಚಿಸಲಾಗಿತ್ತು. ಈ ಕೆಲಸದ ಸಲುವಾಗಿ ಹಲವಾರು ಬರುವರೆಂದು ಅರಿತ ನಾನು, ಮತ್ತು ನನ್ನಂತಹ ಇನ್ನು ಕೆಲವರು ಸ್ವಲ್ಪ ಬೇಗನೆಯೇ ಅಲ್ಲಿ ಸೇರಿದ್ದವು.

ಸಮಯ ೯: ೦೦ ಇನ್ನೂ ಹಲವಾರು ಜನ ನಮ್ಮ ಸಾಲಿನಲ್ಲಿ ಸೇರಿದರು, ಆದರೆ ಆ ಕಛೇರಿಯ ಕಾರ್ಮಚಾರಿಗಳು ಬರುವಂತೆ ಕಂಡು ಬರಲಿಲ್ಲ. ಇಲ್ಲಿ ಸೇರಿದ್ದ ಎಲ್ಲರೂ ತಮ್ಮ ಕೆಲಸಕ್ಕೆ ಹೋಗಲು ಸಿದ್ಧರಾಗಿರುವಂತೆ ಕಂಡು ಬಂದಿತು. ಸೇರಿದ್ದ ಜನರ ಸಂಖ್ಯೆ ೧೦ ರಿಂದ ೨೦, ೧೫ ನಿಮಿಷಗಳಲ್ಲಿ ಸುಮಾರು ೪೦ ಜನ ಸೇರಿದ್ದರು.

ಸಮಯ ೯:೩೦ ಆದರೂ, ಕರ್ಮಚಾರಿಗಳು ಯಾರೂ ಬರಲಿಲ್ಲ.
ತಡವಾಗಿ ಬರುವುದು, ಬಂದ ನಂತರ ನಿರ್ಲಕ್ಷ್ಯತೆಯಿಂದ ಕೆಲಸವನ್ನು  ಮಾಡುವುದು ನಮ್ಮ ಭಾರತ ದೇಶದ ಸಂಸ್ಕ್ರುತಿಯೆಂದೇ ಹಲವರು ನಂಬಿದ್ದೇವೆ. ಹಾಗೆ ನಂಬಿದ್ದ ಕೆಲವು ಜನರು ಇದರ ಬಗ್ಗೆ ಗೊಣಗಲು ಪ್ರಾರಂಭಿಸಿದರು. ‘ಸರಕಾರೀ ಕಛೇರಿಗಳೇ ಹೀಗೆ’, ‘ಏನೂ ಪ್ರಯೋಜನವಿಲ್ಲ’ , ‘ಊಟದ ಸಮಯವನ್ನು ಮಾತ್ರ ಸರಿಯಾಗಿ ಪಾಲಿಸುವರು ‘, ಎಂದು ಇನ್ನೂ ಬಹಳ ರೀತಿಯ ಮಾತಿನ ಕಿಡಿ ಕಾರುತಿದ್ದರು.

ಸಮಯ ೯:೪೫, ಕಛೇರಿಯ ಕಾರ್ಮಿಕರು ಯಾವುದೇ ಆತಂಕವಿಲ್ಲದೆ, ಹಾಯಾಗಿ ಬಂದರು. ಬಂದು, ತಮ್ಮ ವಯಕ್ತಿಕ ಮಾತು ಕಥೆಗಳನ್ನು ಮುಗಿಸಿ ತಮ್ಮ ಕುರ್ಚಿಯಲ್ಲಿ ಬಂದು ಕುಳಿತು ತಮ್ಮ ಕೆಲಸವನ್ನು ನಿಧಾನವಾಗಿ ಪ್ರಾರಂಭಿಸಿದರು. ಅಲ್ಲಿಯವರೆಗೆ  ಗೊಣಗುತ್ತಿದ್ದ ಜನ, ತೆಪ್ಪಗಾಗಿ ತಮ್ಮ ದಾಖಲೆಗನ್ನು ಕೊಟ್ಟು  ಹೋಗ ತೊಡಗಿದರು. ಆತನಕ ಅವರು ಕಿಡಿಕಾರುತಿದುದನ್ನು ಆ ಕಾರ್ಮಿಕರು ನೋಡಲಿಲ್ಲ; ಹಾಗೆ ನೋಡಿದ್ದರೆ, ಸ್ವಲ್ಪವಾದರೂ ಯೋಚಿಸಿ ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕೆಂದು ನಿರ್ಧರಿಸುತ್ತಿದರೋ ಏನೋ . ಆದರೆ ನಮ್ಮ ಜನ ಈಗ ತಮ್ಮ ಬಾಯನ್ನೂ ತೆಗೆಯಲೇ ಇಲ್ಲ .

ಸಮಯ ೧೦:೦೦, ನನ್ನ ಸರದಿ ಬಂದಿತು. ನಾನೂ ನನ್ನ ದಾಖಲೆಗಳನ್ನು ಕೊಟ್ಟು, ಸಹಿ ಮಾಡಿದೆ. ಅದಾದ ನಂತರ ಆ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡೆ. ಸರಿಯಾದ ಸಮಯಕ್ಕೆ ಅವರು ಬಾರದ ಕಾರಣ, ೫೦ ಜನರು ತಮ್ಮ ಕೆಲಸಗಳಿಗೆ ತಡವಾಗಿ ಹೋಗ ಬೇಕಾದ ಪರಿಸ್ಥಿತಿ ಉಂಟಾಗಿದೆ, ಮತ್ತು ಅವರಲ್ಲಿ ಸ್ವಲ್ಪವೂ ಜವಾಬ್ದಾರಿಯಿಲ್ಲವೆಂದು ಹೇಳಿದೆ. ಅಷ್ಟರಲ್ಲಿ, ಆ ಕಾರ್ಮಿಕರು ಬರುವ ಮುನ್ನ ಗೊಣಗುತ್ತಿದ್ದ ಜನರು ನನನ್ನು ಸಮಾಧಾನ ಮಾಡಿಕೊಳ್ಳಲು  ಹೇಳತೊಡಗಿದರು. ಆ ಕಾರ್ಮಿಕರ ಮೇಲೆ ಇದ್ದ ಕೊಪಕ್ಕಿಂತ ಈ ಸತ್ತ-ಪ್ರಜೆಗಳ ಮೇಲೆ ಕೋಪ ಅಧಿಕವಾಯಿತು. ಕಛೇರಿಯ ಕಾರ್ಮಿಕರು ಬರುವ ಮುನ್ನ ಅವರ ಬಗ್ಗೆ ಹರಟೆ ಹೊಡೆದು, ಅವರ ಮುಂದೆ ಏನೂ ಹೇಳದೆ, ಹೇಳುತಿದ್ದ ನನನ್ನು ತಡೆಯುತಿದ್ದ ಆ ಮೂರ್ಖರಂತೆ ವರ್ತಿಸುದ್ದ ಜನರ ಮೇಲೆ ಇನ್ನಷ್ಟು ಕೋಪ ಹೆಚ್ಚಾಯಿತು.
“ಅವರ ಬೆನ್ನ ಹಿಂದೆ ಅವರನ್ನು ನೀವು ಟೀಕಿಸಿದರೆ ಏನು ಪ್ರಾಯೋಜನೆ? ಅವರ ಮುಂದೆ, ಅವರನ್ನು ತರಾಟೆಗೆ ತೆಗೆದರೆ ತಾನೇ ಅವರಲ್ಲಿ ನಮ್ಮ ಬಗ್ಗೆ ಜವಾಬ್ದಾರಿ ಬಂದು, ಕೆಲಸವನ್ನು ಸರಿಯಾಗಿ ಮಾಡುವರು!” ಎಂದು ಅಲ್ಲಿದ ಜನರನ್ನು ಕೇಳಿ, ಅಲ್ಲಿಂದ ಹೊರಡಲು ಆರಂಭಿಸಿದೆ.

ನಾನು ಕೊಪಗೊಂಡುದನ್ನು  ನೋಡಿದ ಒಬ್ಬ ಮಧ್ಯ ವಯಸ್ಕನು ನನಗೆ  ” easy  ..easy  ” ಎಂದು ಉಪವಾದ ಮಾಡಿದರು.
ನಡೆಯುತ್ತಿದ್ದ ನಾನು, ಅವರ ಬಳಿ ನಿಂತು : “ನೀವು  easy  ..easy … ಅಂತ ಹೇಳಿಯೇ ನಮ್ಮ ದೇಶವನ್ನು ಈ ಸ್ಥಿತಿಗೆ ತಂದಿದ್ದೆರೆ …ಕೋಪ ಪಡಬೇಕು ರೀ!”, ಎಂದು ಗರ್ಜಿಸಿ ಅಲ್ಲಿಂದ ಹೊರಟೆ !

ಹಿನ್ನುಡಿ :
ನನ್ನ ಅನಿಸಿಕೆಯ     ಪ್ರಕಾರ ನಮ್ಮ ದೇಶದ ಜನತೆ ಗಾಂಧಿಯವರ ಅಹಿಂಸಾ ತತ್ವವನ್ನು ತಪ್ಪಾಗಿ ಅರಿತು ಅನುಸರಿಸುತಿದ್ದಾರೆ .
ಗಾಂಧೀ ನಮಗೆ ಕೋಪವೇ ಬರಬಾರದು, ಎಲ್ಲವನ್ನು  ಸಹಿಸಿಕೊಂಡು ಹೋಗಬೇಕೆಂದು ಹೇಳಿಕೊಡಲಿಲ್ಲ!

ಅನ್ಯಾಯವನ್ನು ಕಂಡಾಗ ಕೋಪ ಪಡಬೇಕು,
ಆಗ ನಮಗೆ ಬರುವ ಕೋಪವನ್ನು  ಅಹಿಂಸಾತ್ಮಕವಾಗಿ ವ್ಯಕ್ತ ಪಡಿಸಬೇಕು!
ಎಂದು ಗಾಂಧೀ ಹೇಳಿ, ಅವರ ಬದುಕಿನ ಮುಖಾಂತರ ತೋರಿಸಿಕೊಟ್ಟಿದ್ದಾರೆ…

About Raghav/Raghu

A fortunate mass of hydrogen cloud conscious enough to be contemplating that very fact.
This entry was posted in kannada and tagged . Bookmark the permalink.

1 Response to ಕೋಪ ಬರಲೇಬೇಕು!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s