ಬಹಳ ಅಂತರದ ನಂತರ, ಒಂದು ಆಹ್ಲಾದಕರ ಕನ್ನಡ ಚಿತ್ರವನ್ನು ನೋಡುವ ಅವಕಾಶ ದೊರಕಿತು. ಯೋಗರಾಜ ಭಟ್ಟರ ‘ಪಂಚರಂಗಿ’, ಒಂದು ಸರಳವಾದ ಮನೋರಂಜಕ ಚಿತ್ರ. ಇದರಲ್ಲಿ ಬಹಳ ಗಂಭೀರವಾದ ವಿಷಯವಾಗಲಿ, ವಸ್ತುವಾಗಲಿ ಪ್ರಸ್ತಾಪಿಸದೆ, ಸಣ್ಣದೊಂದು ಕಥೆಯನ್ನು ಒಳ್ಳೆಯ ಸಂಗೀತ, ಸಂಭಾಷಣೆಗಳ ಅಭಿರುಚಿಯಿಂದ ಸೇರಿಸಿಸಿ ನಿರೂಪಿಸಲಾಗಿದೆ.
ಇಂದಿನ ಕರಾವಳಿ ಕರ್ನಾಟಕದ ಕಲಾಚಾರದಲ್ಲಿ ನಡೆಯುವ ಎರಡು ದಿನಗಳ ಘಟನೆಗಳನೂ, ಎರಡು ತಾಸುಗಳಲ್ಲಿ ಅತ್ಯಂತ ಸೌಂದರ್ಯವಾಗಿ ಸೆರೆಹಿಡಿದು ಆಹ್ಲಾದಕರವಾಗಿ ನೀಡಿದ್ದಾರೆ ಭಟ್ಟರ ತಂಡ.
ಹಾಡುಗಳಿಗಿಂತಲೂ, ಚಿತ್ರದ ನಾಯಕನಟ ನುಡಿಯುವ ಸಂಭಾಷಣೆಯು, ಆಧುನಿಕ ಕವಿತೆಗಳಂತೆ ರಂಜಕವಾದ್ಗಿದ್ದವು. ಎಲ್ಲಾ ಮಾತುಗಳಿಗೂ ‘ಗಳು’ ಪ್ರತ್ಯಯವನ್ನು ಸೇರಿಸಿ ಆಡುವ ಸಂಭಾಷಣೆಯು ತೀವ್ರ ಕಲ್ಪನೆ, ಹಾಗು ವ್ಯಂಗ್ಯದ ತುತ್ತತುದಿಎನ್ನಿಸುತ್ತದೆ. ಇದು, ಈ ಚಿತ್ರದ ಬಲವೆಂದೂ ಹೇಳಬಹದು.
ನನಗೆ ಇಷ್ಟವಿರುವ ಸಂಭಾಷಣೆಯ ತುಣುಕುಗಳು:
“sslc-ಗಳು, puc-ಗಳು, cet-ಗಳು,
ಇಂಜಿನೀರಿಂಗು, ಪಂಜಿನೀರಿಂಗು, ಮೆಡಿಕಲ್-ಗಳು,
ಹಲ್ಲು ,ಕಿವಿ, ಮೂಗು, ಬಾಯಿ, ಡಾಕ್ಟರಗಳು
ಕೈ ಬೀಸಿ ಕರೆದು, ಕೆರದಲ್ಲಿ ಹೊಡೆವ syllabus-ಗಳು
ಪಾಸು ಮಾಡಲು ಮನಸೇ ಬಾರದ ಕೋರ್ಸುಗಳು;
ಕಷ್ಟದ ಸೀಟುಗಳು, ಗುತ್ತಿಗೆ donation-ಗಳು ,
ಸತ್ತರು parents-ಗಳು, ಇದ್ದರು students-ಗಳು .”