ಏನ್ರೀ ರಾಜಕಾರಣ ಇದು ?

ವಿಧಾನ ಸೌಧದ ಸುತ್ತಲೂ ಮಾಟಮಂತ್ರ ಮಾಡಿ, ನಮ್ಮ  ಎಡಿಯೂರಪ್ಪನ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ರಚಿಸಲಾಗಿದೆ ಅಂತೆ ! 
ಇದನ್ನು ಪರಿಹರಿಸಲು, ವಿಧಾನ ಸೌಧವನ್ನೇ ಮೂರು ದಿನಗಳು ಮುಚ್ಚಿಟ್ಟಿದ್ದಾರೆ.  ಅಲ್ಲದೆ, ವಾಡಿಕೆಯಾಗಿ ಬಳಸಲಾಗುವ ದ್ವಾರವನ್ನು  ಈಗ ಮುಚ್ಚಿ  ,ಬೇರೊಂದು ಸುರ್ಯೋಮುಖಿ ದ್ವಾರವನ್ನು  ಮಾತ್ರ ತೆರೆದಿದ್ದಾರಂತೆ.

ಇಂತಹ ಜನರು ನಮ್ಮ ಮುಖಂಡರು, ನಮ್ಮನು ಅವರ ಆಡಳಿತದಲ್ಲಿ ಭದ್ರವಾಗಿ ನೋಡಿಕೊಳ್ಳುತ್ತಾರೆ ಎಂದು ಕಲ್ಪನೆ ಮಾಡುವುದೂ ಸಾಧ್ಯವಿಲ್ಲ. 
ಏನೋ, ವಯಕ್ತಿಕವಾಗಿ ಪೂಜೆ ಪುರಸ್ಕಾರ ಮಾಡಿಕೊಂಡು ಇದ್ದರು, ಈಗೀಗ, ನಮ್ಮ ರಾಜಕಾರಣವೇ ಪೂಜೆ- ಪುರಸ್ಕಾರ. ಮಾಟ-ಮಂತ್ರಗಳ ಜಾಲದಲ್ಲಿ ಸಿಲುಕಿಸಿ , ಒಂದಿಷ್ಟೂ  ವಿವೇಕವಿಲ್ಲದೆ ನಡೆಸಲಾಗುತ್ತಿದೆ. ಇದನ್ನೆಲ್ಲ್ಲ ಪರಿಗಣಿಸಿ ನೋಡಿದರೆ ಭಯದ ಜೊತೆ, ಅಸಹ್ಯ ಅನಿಸುತ್ತದೆ!

ಇಂತಹೆ ಹುಚ್ಚಾಟ ಏನೋ ನಡೆಯುತ್ತದೆ ಅಂತ ನೋಡಿದರೆ, ಜೊತೆಗೆ, ಟಿ.ವಿ ನಲ್ಲಿ ಹೇಳುವಂತೆ ಶಾಸಕರನ್ನು ಕುದುರೆ ವ್ಯಾಪಾರದಂತೆ ಮಾರಾಟ ಮಾಡುತ್ತಿದ್ದಾರೆ.  
ದೇಶಾದ್ಯಂತ ಪ್ರವಾಸ ಹೋಗಿ, ಚೆನ್ನೈ, ಗೋವಾ, ಪುಣೆ, ಅಲ್ಲಿ -ಇಲ್ಲಿ , ತಮ್ಮ ಬೆಲೆಯನ್ನು  ಹರಾಜು ಹಾಕುತಿದ್ದರೆ! 

ಹಣದ ಹಿಂದೆ ಬಿದ್ದಿರುವ ಶಾಸಕರು, ಮೂಢ ನಂಬಿಕೆಗಳಲ್ಲಿ ಮುಳುಗಿರುವ ಮುಖಂಡರು, ಊಸರವಲ್ಲಿಯಂತೆ ಬಣ್ಣ ಹಾಗು ನಿಲುವುಗಳನ್ನು ಬದಲಾಯಿಸುವ ನಾಯಕರು, ಇದನ್ನೆಲ್ಲಾ ಮರೆತು ಇವರೆಲ್ಲರ ಹಿಂದೆ ಹೋಗುವ ಮೂರ್ಖ ಜನರು – ಬಹಳ ಚೆನ್ನಾಗಿದೆರೀ  ನಮ್ಮ ಕರ್ನಾಟಕದ ರಾಜಕೀಯ  ಅವಸ್ಥೆ !

About Raghav/Raghu

A fortunate mass of hydrogen cloud conscious enough to be contemplating that very fact.
This entry was posted in kannada and tagged . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s